ತ್ವರಿತ ಲಿಂಕ್

ಎ-3 ಠೇವಣಿ ಯೋಜನೆ

ಆದರ್ಶ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿಮಿಟೆಡ್‍ನ ಸದಸ್ಯರಿಗೆ ಎ-3 ಠೇವಣಿ ಯೋಜನೆಯು ಲಭ್ಯವಿವೆ. ಸದಸ್ಯರು 3 ವರ್ಷಗಳ ಮುಕ್ತಾಯದ ಅವಧಿಯಲ್ಲಿ ಠೇವಣಿ ಮೊತ್ತದ ಒಂದೂವರೆ ಪಟ್ಟು ಪಡೆಯಲು ಅರ್ಹರಾಗಿರುತ್ತಾರೆ.

ಯೋಜನೆಯ ವಿಧಅವಧಿ ಠೇವಣಿ
ಅರ್ಹತೆಅಭ್ಯರ್ಥಿ ಸೊಸೈಟಿಯ ಸದಸ್ಯರಾಗಿರಬೇಕು
ಕನಿಷ್ಠ ಠೇವಣಿ ಮೊತ್ತರೂ. 500/- ಮತ್ತು ಅದಕ್ಕಿಂತ ಹೆಚ್ಚು ರೂ. 100/-ರ ಗುಣಕಗಳಲ್ಲಿ
ಮೆಚ್ಯೂರಿಟಿ ಮೊತ್ತಠೇವಣಿ ಮೊತ್ತದ ಒಂದೂವರೆ ಪಟ್ಟು
ಅವಧಿ3 ವರ್ಷಗಳು
ಠೇವಣಿ ಮೇಲೆ ಸಾಲ60%ವರೆಗೆ ಲಭ್ಯವಿರುತ್ತದೆ
ಮೆಚ್ಯೂರಿಟಿಗೆ ಮೊದಲು ಹಿಂಪಡೆಯುವ ಸೌಲಭ್ಯ1 ವರ್ಷದವರೆಗೆ ಲಭ್ಯವಿರುವುದಿಲ್ಲ
1 ವರ್ಷದ ನಂತರ, ಸೊಸೈಟಿಯ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಲಭ್ಯವಿರುತ್ತದೆ
ನಾಮನಿರ್ದೇಶನ ಸೌಲಭ್ಯಲಭ್ಯವಿದೆ

16/7/2018 ರಿಂದ ಜಾರಿಯಲ್ಲಿರುತ್ತದೆ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಎ- 3 ಠೇವಣಿ ಯೋಜನೆಯ ಅವಧಿ ಎಷ್ಟು?

ಎ- 3 ಠೇವಣಿ ಯೋಜನೆಯ ಅವಧಿ 36 ತಿಂಗಳುಗಳು

ಎ- 3 ಠೇವಣಿ ಯೋಜನೆಗೆ ಕನಿಷ್ಠ ಹೂಡಿಕೆ ಮೊತ್ತ ಎಷ್ಟು?

ಎ- 3 ಠೇವಣಿ ಯೋಜನೆಗೆ ಕನಿಷ್ಠ ಹೂಡಿಕೆ ಮೊತ್ತ ರೂ. 500/- ಮತ್ತು ಇದರ ನಂತರ ಈ ಯೋಜನೆಯಲ್ಲಿ ರೂ.100/- ರ ಗುಣಕಗಳಲ್ಲಿ ಹೂಡಿಕೆ ಮಾಡಬಹುದು

ಎ- 3 ಠೇವಣಿ ಯೋಜನೆಯಲ್ಲಿ ಪ್ರೀ ಮೆಚ್ಯೂರಿಟಿ ಸೌಲಭ್ಯವಿದೆಯೇ?

ಎ- 3 ಠೇವಣಿ ಯೋಜನೆಯಲ್ಲಿ 1 ವರ್ಷದವರೆಗೆ ಪ್ರೀ ಮೆಚ್ಯೂರಿಟಿ ಸೌಲಭ್ಯವಿಲ್ಲ. ಒಂದು ವರ್ಷದ ಅವಧಿ ಮುಕ್ತಾಯಗೊಂಡ ನಂತರ ಸೊಸೈಟಿಯ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಅವಧಿಗೆ ಮುನ್ನವೇ ಹಿಂಪಡೆಯುವ ಸೌಲಭ್ಯವಿದೆ.

ಎ- 3 ಠೇವಣಿ ಯೋಜನೆಯಲ್ಲಿ ಸಾಲದ ಸೌಲಭ್ಯವಿದೆಯೇ?

ಹೌದು! ಎ- 3 ಠೇವಣಿ ಯೋಜನೆಯ ಮೇಲೆ ಸಾಲ ಸೌಲಭ್ಯವಿದೆ. ಎ-3 ಯಲ್ಲಿ ಮಾಡಿದ ಹೂಡಿಕೆಯ ಮೊತ್ತ ಮೇಲೆ ಸದಸ್ಯರು ಗರಿಷ್ಠ 60% ವರೆಗೆ ಸಾಲ ಪಡೆಯಬಹುದು.

ಅಧಿಕ-ಬಡ್ಡಿ ದರಗಳಿಗೆ ಎ-3 ಠೇವಣಿ ಯೋಜನೆ

ಅಧಿಕ ಲಾಭವನ್ನು ನೀಡುವ ಹಣಕಾಸು ಉತ್ಪನ್ನಗಳು ಮತ್ತು ಹೂಡಿಕೆ ಯೋಜನೆಗಳ ವಿಷಯಕ್ಕೆ ಬಂದಾಗ ತನ್ನ ಸದಸ್ಯರ ನಿರೀಕ್ಷೆಗಳನ್ನು ಪೂರೈಸುವಲ್ಲಿ ಆದರ್ಶ ಕೆರ್ಡಿಟ್ ಕೋಓಪರೇಟಿವ್ ಲಿಮಿಟೆಡ್ ಯಾವತ್ತೂ ವಿಫಲವಾಗುವುದಿಲ್ಲ. ಈ ಬಾರಿ ಆದರ್ಶ್ ಕ್ರೆಡಿಟ್ ನಿಮಗಾಗಿ -3 ಠೇವಣಿ ಯೋಜನೆಯನ್ನು ಹೊಂದಿದೆ. ಈ ಯೋಜನೆಯು ನಿಮಗೆ ಕನಿಷ್ಟ ರೂ 500 ಅನ್ನು ಹೂಡಲು ಅನುವು ಮಾಡಿಕೊಡುತ್ತದೆ ಮತ್ತು ಅದರ ನಂತರ ನೀವು 3 ವರ್ಷಗಳ ಅವಧಿಗೆ ರೂ 100 ರ ಗುಣಕಗಳಲ್ಲಿ ಹೂಡಿಕೆ ಮಾಡಬಹುದು.

ಆದರ್ಶ್ ಕ್ರೆಡಿಟ್‍ನಲ್ಲಿ, ಅದರ ಸದಸ್ಯರು ತಮ್ಮ ಹೂಡಿಕೆಗಳಿಗೆ ಹೆಚ್ಚಿನ ಪ್ರಯೋಜನ ಪಡೆಯುವಂತೆ ಎಲ್ಲಾ ಹಣಕಾಸು ಉತ್ಪನ್ನಗಳನ್ನು ವಿನ್ಯಾಸಗೊಳಿಸುವುದನ್ನು ಖಾತರಿಪಡಿಸಿಕೊಳ್ಳಲಾಗುತ್ತದೆ. ಮತ್ತು ಎ- 3 ಅಂತಹ ಒಂದು ಹೂಡಿಕೆಯ ಯೋಜನೆಯಾಗಿದ್ದು, ಇದರಲ್ಲಿ 3 ವರ್ಷಗಳು ಪೂರ್ಣಗೊಂಡ ನಂತರ ನೀವು ಠೇವಣಿಯ ಒಂದೂವರೆ ಪಟ್ಟು ಮೊತ್ತವನ್ನು ಪಡೆಯಬಹುದು. ಹಾಗಾಗಿ, ಈ ಕೊಡುಗೆಯನ್ನು ಪಡೆದುಕೊಳ್ಳಲು ಮತ್ತು ನಿಮ್ಮ ಹೂಡಿಕೆಗಳಲ್ಲಿ ಲಾಭ ಪಡೆಯಲು ಸದ್ದಿಲ್ಲದೇ ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ.

ಹಕ್ಕುತ್ಯಾಗ: ಸೊಸೈಟಿಯ ಎಲ್ಲಾ ಉತ್ಪನ್ನಗಳು ಮತ್ತು ಸೇವೆಗಳು ಕೇವಲ ಆದರ್ಶ ಕ್ರೆಡಿಟ್ ಕೋ-ಓಪರೇಟಿವ್ ಲಿಮಿಟೆಡ್‍ನ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ.

ಎ-3 ಕ್ಕೆ ಈಗಲೇ ವಿಚಾರಿಸಿ

Name
Email
Phone no
Message

© Copyright - Adarsh Credit. 2018 All rights reserved. Designed and developed by Communication Crafts.